Saturday, 7 January 2012

ಮಾಹಿತಿ. .


ಚಾಲಿ ಅಡಿಕೆ ಧಾರಣೆ ನೆಗೆತ Udayavani | Oct 29, 2011 ಪುತ್ತೂರು : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಶನಿವಾರ ಧಾರಣೆ ಏರಿಕೆ ವಾತಾವರಣ ಆರಂಭಗೊಂಡಿದೆ. ಮಂಗಳೂರು ಚಾಲಿ ಹಳೆ ಅಡಿಕೆ ಕೆ.ಜಿ.ಗೆ 195 ರೂ. ಮತ್ತು ಹೊಸ ಅಡಿಕೆ ಕೆ.ಜಿ.ಗೆ 185 ರೂ. ಗಳಿಗೆ ವಿಕ್ರಯಗೊಂಡಿದೆ. ವಿಟ್ಲ ಪರಿಸರದಲ್ಲೂ ಇದೇ ಧಾರಣೆಗೆ ಅಡಿಕೆ ಖರೀದಿಗೊಂಡಿದೆ ಎಂದು ಕೃಷಿಕರು ತಿಳಿಸಿದ್ದಾರೆ. ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಹಳೆ ಮತ್ತು ಹೊಸ ಅಡಿಕೆಗೆ ತಲಾ 2 ರೂ. ಗಳಂತೆ ಏರಿಕೆಗೊಳಿಸಿ ಮಾರುಕಟ್ಟೆಯ ಮೇಲ್ಮುಖ ವಾತಾವರಣಕ್ಕೆ ಪೂರಕ ಸಹಕಾರ ನೀಡಿದೆ. ಪುತ್ತೂರು ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಕ್ಯಾಂಪ್ಕೋ ಶಾಖೆಯು ಹಳೆ ಅಡಿಕೆಗೆ ಕೆ.ಜಿ.ಗೆ 192 ರೂ. ಹೊಸ ಅಡಿಕೆಗೆ ಕೆ.ಜಿ.ಗೆ 182 ರೂ. ಗಳಲ್ಲಿ ಖರೀದಿ ನಡೆಸಿದೆ. ಎ.ಪಿ.ಎಂ.ಸಿ. ಪ್ರಾಂಗಣದ ಹೊರಗಿನ ಖಾಸಗಿ ವಲಯದ ಅಡಿಕೆ ಖರೀದಿದಾರರು ಕ್ಯಾಂಪ್ಕೋಗಿಂತ ಕೆ.ಜಿ.ಗೆ ತಲಾ 3 ರೂ. ಗಳಷ್ಟು ಹೆಚ್ಚುವರಿ ಧಾರಣೆ ನೀಡಿ ಅಡಿಕೆ ಖರೀದಿಸಿದ್ದಾರೆ. ಆದರೆ ಅಡಿಕೆ ಆವಕ ಪ್ರಮಾಣ ಮಾತ್ರ ಬಹಳಷ್ಟು ಕ್ಷೀಣವಾಗಿತ್ತು. ಸೋಮವಾರದ ಬಳಿಕ ಅಡಿಕೆಯ ಧಾರಣೆ ಗರಿಷ್ಠ ಪ್ರಮಾಣಕ್ಕೆ ಏರಲಿರುವ ಲಕ್ಷಣಗಳನ್ನು ಮನಗಂಡಿರುವ ಬೆಳೆಗಾರರು ಅಡಿಕೆಯನ್ನು ಮಾರುಕಟ್ಟೆಗೆ ತರುತ್ತಿಲ್ಲ.
 ·  ·  · 30 October 2011 at 20:37

No comments:

Post a Comment